Register with KarunaduOne Services today and join a trusted nationwide network. Provide essential government, financial, and utility services to your community through a simple, user-friendly platform. Expand your reach, serve more citizens, and enjoy exclusive tools and dedicated support to grow your center.
ಕರುನಾಡು ಒನ್ ಬಗೆಗಿನ ಪರಿಚಯ
ಕರುನಾಡು ಒನ್ ಎಂಬುದನ್ನು ಗ್ರಾಮೀಣ ಮಟ್ಟದಲ್ಲಿ ಎಲ್ಲಾ ನಾಗರೀಕ ಕೇಂದ್ರೀಕೃತ ಏಕ ಸಹಾಯಕ ಕೇಂದ್ರ ವ್ಯವಸ್ಥೆ ಎಂಬುದಾಗಿ ಊಹಿಸಬಹುದಾಗಿದೆ. ಎಂದರೆ ಇದರಲ್ಲಿ ಜಿಸಿ ಸೇವೆಗಳು, ಬ್ಯಾಂಕಿಂಗ್ ಸೇವೆಗಳು, ಆರ್.ಟಿ.ಐ. ಪ್ರಶ್ನೆಗಳು ಇತ್ಯಾದಿಗಳು ಒಳಗೊಂಡಿರುತ್ತವೆ. ೨೦೨೪-೨೫ ರ ಹಣಕಾಸು ವರ್ಷದ ಆಯವ್ಯಯ ಪತ್ರದಲ್ಲಿ ಗೌರವಾನ್ವಿತ ಕರ್ನಾಟಕ ರಾಜ್ಯದ ವಾರದ ಎಲ್ಲಾ ಏಳು (೭) ದಿನಗಳಲ್ಲೂ ಬೆಳಿಗ್ಗೆ ೯.೦೦ ರಿಂದ ರಾತ್ರಿ ೭೦೦ ಗಂಟೆಯವರೆಗೆ ಕರುನಾಡು ಒನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ.
ಕರುನಾಡು ಒನ್ ಕೇಂದ್ರಗಳ ಊಹಿಸಬಹುದಾದ ಲಾಭಗಳೆಂದರೆ
• ನಾಗರಿಕರು ಸರ್ಕಾರಿ ಸೇವೆಗಳನ್ನು ಪಡೆಯಲು ನಮ್ಮ ಕರುನಾಡು ಒನ್ ಕೇಂದ್ರಕ್ಕೆ ಬೇಟಿ ನೀಡಿದರೆ ನಮ್ಮ ಕಾರ್ಯದರ್ಶಿಗಳು ಸಹಾಯಮಾಡುತ್ತಾರೆ.
• ಕರುನಾಡು ಒನ್' ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆಯುವ ಮೂಲಕ ನಾಗರೀಕರು ಸಮಯ ಮತ್ತು ಹಣವನ್ನು ಉಳಿಸಬಹುದಾಗಿದೆ.
ಕರುನಾಡು ಒನ್ ಕೇಂದ್ರಗಳು ಬೆಳಿಗ್ಗೆ ೯.೦೦ ಗಂಟೆಯಿಂದ ರಾತ್ರಿ ೭೦೦ ಗಂಟೆವರೆಗೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ನಾಗರೀಕರು, ಸೇವೆಗಳನ್ನು ಅವರಿಗೆ ಅನುಕೂಲವಾಗುವ ಸಮಯದಲ್ಲಿ ಪಡೆಯಬಹುದಾಗಿದೆ.
* ಅವಶ್ಯಕತೆಗಳು
ಕರುನಾಡು ಒನ್ ನಿರ್ದೇಶನಾಲಯ, (ಇ-ಆಡಳಿತ), ಕರ್ನಾಟಕ ಸರ್ಕಾರದ ಒಂದ
ಸೂರಿನಡಿ ವಿವಿಧ ಸರ್ಕಾರಿ ಖಾತೆಗಳ ಮತ್ತು ಖಾಸಗಿ ಸಂಸ್ಥೆಗಳ ಸೇವೆಗಳನ್ನು ನಾಗರೀಕರಿಗೆ ಸ್ನೇಹತ್ವ ರೀತಿಯಲ್ಲಿ ಒದಗಿಸಲು ಕರುನಾಡು ಒನ್ ಕೇಂದ್ರಗಳನ್ನು ತೆರೆದಿದೆ.
ಕರುನಾಡು ಒನ್ನ ಕಾರ್ಯಾಚರಣೆಯ ಪಾಲುದಾರ ಮೂಲಕ ಕರುನಾಡು ಒನ್ ನಿರ್ದೇಶನಾಲಯವು ಯೋಜನಯದಲ್ಲಿ ಫ್ರಾಂಚೈಸಿ ಮಾದರಿಯಲ್ಲಿ ಕರುನಾಡು ಒನ್ ಕೇಂದ್ರಗಳನ್ನು ಕರ್ನಾಟಕದ ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬೆಂಗಳೂರು, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಕಾರವಾರ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ಮಂಗಳೂರು, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ವಿಜಯನಗರ, ವಿಜಯಪುರ, ಯಾದಗಿರ ಜಿಲ್ಲೆಗಳಲ್ಲಿ ಸ್ಥಾಪಿಸಲು ಪುಸ್ತಾಪಿಸಿದೆ.
೩೧ ಜಿಲ್ಲೆಗಳಲ್ಲಿ ಮಾತ್ರ ಕರುನಾಡು ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಗಮನಿಸಬಹುದು.
> ಮಾಹಿತಿ ತಂತ್ರಜ್ಞಾನ ರಹಿತ ಮೂಲ ಸೌಕರ್ಯದ ಅವಶ್ಯಕತೆಗಳು
ಪ್ರಾಂಚೈಸಿ ಮೂಲಕ ಸ್ಕ್ಯಾಪಿಸಲಾಗುವ ಕರುನಾಡು ಒನ್ ಕೇಂದ್ರವು ಒಂದು ವಿಶೇಷ (ಪ್ರತ್ಯೇಕ) ಪ್ರವೇಶವುಳ್ಳ ವಿಶೇಷ ವಿಭಜನೆ (ಪಾರ್ಟಿಷನ್) ಹೊಂದಿರಬೇಕು.
> ಒಂದು ಕೌಂಟರ್ವುಳ್ಳ ಕರುನಾಡು ಒನ್ ಕೇಂದ್ರಗಳು ಕನಿಷ್ಕ ೧೦೦ ಚ.ಅಡಿಗಳ ಅಳತೆ ಹೊಂದಿರಬೇಕು. ಗ್ರಾಹಕರು ಕುಳಿತುಕೊಳ್ಳಲು ನಾಲ್ಕು, ಕುರ್ಚಿಗಳು ಇರಬೇಕು.
> ಬ್ರಾಂಡಿಂಗ್ (ಮುದ್ರಗಳು)ಗಳು ಕರುನಾಡು ಒನ್ ಯೋಜನೆಯ ಬ್ರಾಂಡಿಂಗ್ ಗುಣಮಟ್ಟದ ರೀತಿಯಲ್ಲಿರಬೇಕು (ಹೆಸರಿನ ಫಲಕ ಕಟ್ಟಡದ ಬಣ್ಣ, ಕರುನಾಡು ಒನ್ ದ ಮನೋಗ್ರಾಂ).
ಫ್ರಾಂಚೈಸಿಗಳು ತಮ್ಮ ಸಮುಚ್ಚಯವನ್ನು ಸ್ವಚ್ಛ ಮತ್ತು ಅಚ್ಚುಕಟ್ಟಾಗಿ ಇರಿಸಿರಬೇಕು. ಕೊಠಡಿಯ ನೆಲಹಾಸು ಕೂಡಿರಬೇಕು, ಮೇಲ್ಯಾವಣಿ ಇರಬೇಕು ಮತ್ತು ಸೀಮೆಂಟ್ ಇಟ್ಟಿಗೆ ಸೀಮೆಂಟ್ ಕಲ್ಲಿನಿಂದ ಗೋಡೆಗಳು ನಿರ್ಮಾಣವಾಗಿರಬೇಕು. ಯಾವುದೇ ಭಾಗದಲ್ಲೂ ನೀರು
ಸೋರಿಕೆ ಕಂಡುಬರಬಾರದು.
ಕೊಠಡಿಯಲ್ಲಿ ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಇರಬೇಕು ಹೊರಗಡೆ ವಾಹನ ನಿಲುಗಡೆಗೆ ಬೋರ್ಡ್ಗಳನ್ನು ಪ್ರದರ್ಷಿಸಲು ಇತ್ಯಾದಿಗಳಿಗಾಗಿ ಸಾಕಷ್ಟು ಸ್ಥಳಾವಕಾಶ ಇರಬೇಕು. ಪೀಠೋಪಕರಣಗಳು ಕರುನಾಡು ಒನ್ನಲ್ಲಿ ನಿರ್ಧಿಷ್ಟಗೊಳಿಸಿದ ರೀತಿಯಲ್ಲಿರಬೇಕು (ಕೌಂಟರ್ಟೇಬಲ್ ಆಪರೇಟರ್ರ ಕುರ್ಚಿ ಪ್ರಿಂಟರ್ಟೇಬಲ್ ಗ್ರಾಹಕರು ಕಾಯುವ ಕುರ್ಚಿ).
ಪ್ರಾಂಚೈಸಿಗಳು ಸಿ.ಸಿ.ಟಿ.ವಿ. ಕಣಾವಲು ಮತ್ತು ಎಲ್.ಸಿ.ಡಿ.ಟಿ.ವಿ. ಯನ್ನು ಹೊಂದಿರಬೇಕು. ಕೇಂದ್ರವನ್ನು ಸ್ಥಾಪಿಸಲು ಬೇಕಾಗುವ ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯಗಳು ಡೆಸ್ಕ್ಟಾಪ್ / ಲ್ಯಾಪ್ಟಾಪ್ (ಐ೩ ಸಂರಚನೆಗಿಂತ ಹೆಚ್ಚಿನವುಗಳದ್ದು)
ವಿವಿಧ ಕಾರ್ಯಕಾರಿ ಪ್ರಿಂಟರ್ (ಪ್ರೀಂಟ್/ಸ್ಕ್ಯಾನ್)
ಬಯೋಮೆಟ್ರಿಕ್ ಸ್ಕ್ಯಾನರ್ (ಸೆಕ್ಯೂಜೆನ್ ಹ್ಯಾಮಸ್ಟರ್ ಪ್ರೋ೨೦)
ವೆಬ್ ಕ್ಯಾಮರಾ
ವೈ-ಫೈ ರಿಸೀವರ್
ಇಬ್ಬರು ಅಂತರ್ಜಾಲ ಸೇವೆ ಒದಗಿಸುವವರಿಂದ ಅಂತರ್ಜಾಲ ಸಂರಕ್ಷಕ ಹೊಂದಿರಬೇಕು (ಐಎಸ್ಪಿಎಸ್) ಕಾರಣ ಅಂತರ್ಜಾಲ ಸಂರಕ್ಷಕ ವ್ಯವಸ್ಥೆಯ ವ್ಯತಿರಕ್ತತೆಯಿಂದ ಸೇವೆಗಳಿಗೆ ಅಡ್ಡಿ ಉಂಟಾಗಬಹುದು ಎಂಬ ಕಾರಣಕ್ಕಾಗಿ ಆ ವ್ಯವಸ್ಥೆ ಇರಬೇಕು.
ಅರ್ಹತಾ ಮಾನದಂಡಗಳು
ಕಂಪ್ಯೂಟರ್ ಜ್ಞಾನ ಹೊಂದಿರುವ ಎಸ್.ಎಸ್.ಎಲ್.ಸಿ ಪಿಯುಸಿ
ಡಿಪ್ಲೊಮಾ ಐಟಿಐ ಪದವಿ/ ಸ್ನಾತಕೋತ್ತರ ಪದವಿ ಯಾವುದೇ ವಿಭಾಗದಲ್ಲೂ ಕನಿಷ ಅರ್ಹತೆ ಹೊಂದಿರಬೇಕು.
* ರೂ. ೩೦ ರಿಂದ ೧ಲಕ್ಷ ಬಂಡವಾಳ ಹೂಡಿಕೆ ಮಾಡುವ ಸಾಮಥ್ಯ
ಹೊಂದಿರಬೇಕು.
* ಸಮುಚ್ಚಯವು ಕೇಂದ್ರ ಸ್ಥಾನದಲ್ಲಿರಬೇಕು ಮತ್ತು ಸಾರ್ವಜನಿಕರು ಸುಲಭವಾಗಿ (ದೊರೆಯುವಂತಿರಬೇಕು)
ಷರತ್ತು ಮತ್ತು ನಿಬಂಧನೆಗಳು
ಕರುನಾಡು ಒನ್ ಫ್ರಾಂಚೈಸಿ ಯೋಜನೆಗೆ ಅರ್ಜಿ ಶುಲ್ಕಕ್ಕೆ ರೂ. ೧೯೯ - ಪಾವತಿಸಲು ನಾನು ಒಪ್ಪುತ್ತೇನೆ ಮತ್ತು ಅದನ್ನು ಮರುಪಾವತಿಸಲಾಗುವುದಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನ
ಕರುನಾಡು ಒನ್ ಫ್ರಾಂಚೈಸಿ ಪ್ರಾಯೋಗಿಕ ಯೋಜನೆಗೆ ನನ್ನ ಅರ್ಜಿಯನ್ನು ಹೆಚ್ಚಿನ ಪರಿಗಣನೆಗೆ ಆಯ್ಕೆ ಮಾಡಿದರೆ, ಪಾವತಿಸಬಹುದಾದ ಭದ್ರತಾ ಠೇವಣಿ ಶುಲ್ಕಕ್ಕೆ ರೂ. ೧೫೯೯೯/- ಪಾವತಿಸಲು ನಾನು ಒಪ್ಪುತ್ತೇನ
ಫ್ರಾಂಚೈಸಿ ಮಾದರಿಯಲ್ಲಿ ಕರುನಾಡು ಒನ್ ಕೇಂದ್ರವನ್ನು ಸ್ಥಾಪಿಸಲು ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಾನು ಓದಿದ್ದೇನೆ ಮತ್ತು ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ನಾನು ಒಪ್ಪುತ್ತೇನೆ